Category: Uncategorized

  • ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಮ್ ನಲ್ಲಿ ಭದ್ರ

    ವಿವಿಪ್ಯಾಟ್‌ಗಳಿಗೆ ಬಿಗಿ ಭದ್ರತೆ | ಸಿಸಿ ಟಿವಿ ಕ್ಯಾಮೆರಾ ಕಣ್ಣಾವಲು ಶಿವಮೊಗ್ಗ: ಇಲ್ಲಿನ ಲೋಕಸಭಾ ಕ್ಷೇತ್ರಕ್ಕೆ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಮಾಡಿದ ಮತಯಂತ್ರ, ವಿವಿಪ್ಯಾಟ್‌ಗಳನ್ನು ಜಿಲ್ಲಾ ಚುನಾವಣಾಧಿಕಾರಿ ಸಮ್ಮುಖದಲ್ಲಿ ಮತ ಎಣಿಕೆ ಕೇಂದ್ರದೊಳಗೆ ಸೀಲ್ ಮಾಡಿದ ಅನೇಕ ಬಾಕ್ಸ್‌ಗಳನ್ನು ಭದ್ರತಾ ಕೊಠಡಿಗಳ ಒಳಗಿಟ್ಟು ಬೀಗ ಮುದ್ರೆ ಹಾಕಲಾಯಿತು. ನಗರದ ಸಹ್ಯಾದ್ರ ಕಾಲೇಜಿನ ಕಟ್ಟಡದಲ್ಲಿ ಜೂ. 4ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ನಂತರ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಇದಕ್ಕಾಗಿ ನಿರ್ಮಿಸಿರುವ ಭದ್ರತಾ ಕೊಠಡಿಗಳಲ್ಲಿ ಈಗಾಗಲೇ ಸೂಕ್ತ…

  • ಚುನಾವಣೆಯಲ್ಲಿ ಗೆದ್ದು ಮೋದಿ ಕೈ ಬಲಪಡಿಸುತ್ತೇನೆ: ಕೆ.ಎಸ್‌.ಈಶ್ವರಪ್ಪ 

    ಬಿಜೆಪಿ ಪಕ್ಷದಲ್ಲಿ ನೊಂದ ಕಾರ್ಯಕರ್ತರ ಧ್ವನಿಯಾಗಿ ಕುಟುಂಬ ರಾಜಕಾರಣ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆ. ಬ್ರಹ್ಮ ಬಂದು ಹೇಳಿದರೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ. ಸ್ಪರ್ಧೆ ಮಾಡಿ ಗೆದ್ದು ಮೋದಿ ಕೈ ಬಲ ಪಡಿಸುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ಚರಪ್ಪ ಹೇಳಿದರು.  ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹೆಮ್ಮಾಡಿಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾತನಾಡಿದ ಈಶ್ವರಪ್ಪ ನವರು, ಯಡಿಯೂರಪ್ಪ ಕೇಂದ್ರದವರಿಗೆ ಮಂಕು ಬೂದಿ ಎರಚಿದ್ದಾರೆ. ಸುಳ್ಳು ಹೇಳಿ ಮೋಸ ಮಾಡಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಹಿಂದುತ್ವದ ಹೋರಾಟಗಾರರಾದ ಸಿ.ಟಿ.ರವಿ, ಪ್ರತಾಪ್…

  • ಕುಂಚೇನಹಳ್ಳಿಯಲ್ಲಿ ಗೀತಾ ಶಿವರಾಜ್‌ ಕುಮಾರ್‌ಯಗಾದಿ ಸಂಭ್ರಮ

    ಹಾಡು ಹೇಳಿ, ಕುಣಿದು ತಾಂಡ ಜನರನ್ನುಭರಪೂರ ರಂಜಿಸಿದ ನಮ್ಮೂರ ಹುಡುಗ ……………………….. ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿ ಯಲ್ಲಿ ಮಂಗಳವಾರ ಯುಗಾದಿ ಸಂಭ್ರಮ ಜೋರಾಗಿತ್ತು. ಪಶ್ವಿಮದಲ್ಲಿ ಸೂರ್ಯ ಜಾರಿ, ನಸುಕತ್ತಲು ಆವರಿಸುವ ಹೊತ್ತಿಗೆ ತಾಂಡಾದ ಜನರು ಕನ್ನಡದ ಹೆಸರಾಂತ ನಟ ಶಿವರಾಜ್‌ ಕುಮಾರ್‌ ಹಾಗೂ ಅವರ ಪತ್ನಿ ಗೀತಾ ಶಿವರಾಜ್‌ ಕುಮಾರ್‌  ಅವರೊಂದಿಗೆ ಯುಗಾದಿ ಹಬ್ಬವನ್ನು ಸಂಭ್ರಮ ಸಡಗರದಲ್ಲಿ ಆಚರಿಸಿದರು. ಕೆಳಗಿನ ಕುಂಚೇನಹಳ್ಳಿ ತಾಂಡದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮಕ್ಕೂ ಮುನ್ನಮೇಲಿನ ಕುಂಚೇನಹಳ್ಳಿಯ ಸೇವಾಲಾಲ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕಾಂಗ್ರೆಸ್…

  • ಬೈಂದೂರಿನಲ್ಲಿ ಈಶ್ವರಪ್ಪ ಬಿರುಸಿನ ಪ್ರಚಾರ

    ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಬುಧವಾರ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಪ್ರಚಾರಕ್ಕೂ ಮೊದಲು ಈಶ್ವರಪ್ಪ ಕೊಲ್ಲೂರಿಗೆ ತೆರಳಿ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದರು. ದೇವರ ಕುಂದ, ನೆಂಪು, ಬಗ್ವಾಡಿ ಕ್ರಾಸ್, ಕಂಚಕೋಡು, ನಾಗೂರು, ಉಪ್ಪುಂದ, ಬೈಂದೂರು, ಶಿರೂರು ಗ್ರಾಮಗಳಿಗೆ ತೆರಳಿ ಕಾರ್ಯಕರ್ತ ಸಭೆ ನಡೆಸಿ ಚುನಾವಣಾ ಪೂರ್ವ ಭಾವಿ ಸಭೆ ನಡೆಸಿದರು. ಗ್ರಾಮಸ್ಥರನ್ನು ಉದ್ದೇಶಿಸಿ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಪ್ಪ ಮಕ್ಕಳ ಹಿಡಿತದಲ್ಲಿದೆ, ಹಿಂದುತ್ವ ಪರ…

  • ಏ. 12ಕ್ಕೆ ನಾಮಪತ್ರ ಸಲ್ಲಿಕೆ-18ಕ್ಕೆ  ಬಹಿರಂಗ ಸಭೆ : ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಜಿ.ಬಿ.ವಿನಯ್‌ ಕುಮಾರ್ ಘೋಷಣೆ

    ದಾವಣಗೆರೆ ಲೋಕ ಸಭಾ ಕ್ಷೇತ್ರದ 8 ತಾಲೂಕುಗಳಲ್ಲಿ ಜನಾಭಿಪ್ರಾಯ ಸಂಗ್ರಹದ ಪ್ರವಾಸ ಕೈಗೊಂಡ ನಂತರ ಮತದಾರರ ಅಭಿಪ್ರಾಯದ ಮೇರೆಗೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣ್ಕಕೆಇಳಿಯಲು ನಿರ್ಧಾರ ಕೈಗೊಂಡಿದ್ದೇನೆ. ಏಪ್ರಿಲ್‌ 12ರಂದು ನಾಮಪತ್ರ ಸಲ್ಲಿಸಿ, 18ರಂದು ಬೃಹತ್‌ ಬಹಿರಂಗ ಸಭೆ ನಡೆಸುತ್ತೇನೆಂದು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಜಿ.ಬಿ.ವಿನಯ್‌ ಕುಮಾರ್ ಘೋಷಣೆ  ಮಾಡಿದ್ದಾರೆ. ನಗರದ ಎಸ್.ಎಸ್. ಬಡಾವಣೆಯ ತಮ್ಮ ಗೃಹ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲಿ ಅಧಿಕಾರ, ಆಸ್ತಿ, ಅವಕಾಶಗಳು ಕೇವಲ ಎರಡು ಕುಟುಂಬಗಳ ಹಿಡಿತದಲ್ಲಿವೆ. ಟಿಕೆಟ್‌…

  • ದಾವಣಗೆರೆಯಲ್ಲಿನ ಬಿಜೆಪಿ ಬಂಡಾಯ ತಾತ್ಕಲಿಕ ಶಮನ : ಗಾಯತ್ರಿ ಸಿದ್ದೇಶ್ವರ್‌ ಗೆಲುವಿಗೆ ಶ್ರಮಿಸಿ ಎಂದು ಸೂಚನೆ ಕೊಟ್ಟ ಬಿಎಸ್‌ ವೈ

    ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಗಾಯತ್ರಿ ಸಿದ್ದೇಶ್ವರ್ ಗೆ ಬಿಜೆಪಿ ಟಿಕೆಟ್‌ ಘೋಷಣೆಮಾಡಿದಾಗಿನಿಂದ ಜಿಲ್ಲಾ ಬಿಜೆಪಿಯಲ್ಲಿ ಎದ್ದಿದ್ದ ಬಂಡಾಯವನ್ನು ತಾತ್ಕಲಿಕವಾಗಿಶಮನಗೊಳಿಸುವಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಯಶಸ್ವಿಯಾಗಿದ್ದು, ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಸೂಚನೆ ನೀಡಲಾಗಿದೆ ತಿಳಿದು ಬಂದಿದೆ. ಸಂಸದ ಜಿ. ಎಂ. ಸಿದ್ದೇಶ್ವರ ಹಾಗೂ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಎಸ್.‌ ಎ.ರವೀಂದ್ರನಾಥ್ ಅವರ ಬಣದ ನಡುವೆ ‌  ನಗರದ ಅಪೂರ್ವ ರೆಸಾರ್ಟ್ ನಲ್ಲಿ ನಡೆಸಿದಸಭೆಯಲ್ಲಿ ಸಂಧಾನ ಯಶಸ್ವಿಯಾಗಿದೆ.ಸಭೆಯಲ್ಲಿ ರವೀಂದ್ರನಾಥ್, ರೇಣುಕಾಚಾರ್ಯ,…

  • ಕೋಟೆ  ಮಾರಿಕಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಗೀತಾ ಶಿವರಾಜ್‌ ಕುಮಾರ್‌

    ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರು ಪತಿ ಶಿವರಾಜ್‌ ಕುಮಾರ್‌ ಸಮೇತ್‌ ಮಂಗಳವಾರ ನಗರದ ಕೋಟೆ ಶ್ರೀ ಮಾರಿಕಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದಲ್ಲಿ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಪತಿ ಶಿವರಾಜ್‌ಕುಮಾರ್‌ರವರೊಂದಿಗೆ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಬದಲಾವಣೆಗಾಗಿ ನನಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.ಕ್ಷೇತ್ರದ ಉದ್ದಕ್ಕೂ  ಉತ್ತಮ ವಾತಾವರಣ ಕಂಡು ಬರುತ್ತಿದೆ. ಅಪಾರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಮಹಿಳೆಯರು ಕೂಡ ಹೆಚ್ಚಾಗಿ…

  • ಬಣ್ಣದೊಕುಳಿಯಲ್ಲಿ ಮಿಂದೆದ್ದ ನಗರಿ

     ಶಿವಮೊಗ್ಗ ನಗರ ಬಣ್ಣದೋಕುಳಿಯಲ್ಲಿ ಮಿಂದೆದ್ದಿತ್ತು. ಮಂಗಳವಾರ ನಗರದಲ್ಲಿ  ಸಡಗರ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಯಿತು. ಯುವಕ ಯುವತಿಯರು ಬಣ್ಣ ಬಳಿದುಕೊಂಡು ಪರಸ್ಪರ ಎರಚಿಕೊಂಡು ಬೈಕುಗಳಲ್ಲಿ ಸವಾರಿ ಮಾಡುತ್ತ ರಂಗು ರಂಗಿನ ಹೋಳಿ ಸಂಭ್ರಮದಲ್ಲಿ ಮಿಂದೆದ್ದರು. ವಿಶೇಷ ಅಂದ್ರೆ ಹೊಳಿ ಹಬ್ಬದ ಸಂಭ್ರಮಾಚರಣೆಯೂ ಕಳೆದ ವರ್ಷದಂತೆ ಈ ಬಾರಿಯೂ  ಗೋಪಿ ವೃತ್ತದಲ್ಲಿಯೇ ಕೇಂದ್ರಿಕೃತವಾಗಿ, ಇಡೀ ಹಬ್ಬವೇ ರಂಗೇರುವಂತೆ ಮಾಡಿತು.  ಸಾವಿರಾರು ಸಂಖ್ಯೆಯಲ್ಲಿ  ಯುವಕ – ಯುವತಿಯರು ಹೆಚ್ಚಾಗಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು, ಹಬ್ಬ ಕಳೆಗಟ್ಟುವಂತೆ ಮಾಡಿದರು. ಬೆಳಗ್ಗೆಯಿಂದಲೇ ಮೈ ತುಂಬಾ…

  • ಗೀತನಿಗೊಂದು  ಅವಕಾಶ ಕೊಡಿ‌ :  ಶಿವರಾಜ್‌ ಕುಮಾರ್‌  ಭಾವುಕ ಮನವಿ

    ಗೀತನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಆಕೆಗೆ ಜನರಿಗಾಗಿ ಕೆಲಸ ಮಾಡುವ ಆಸೆ ಇದೆ. ಒಂದೇ ಒಂದು ಅವಕಾಶ ಕೊಡಿ ಎಂದು ಜನಪ್ರಿಯ ನಟ ಶಿವರಾಜ್‌ಕುಮಾರ್ ತಮ್ಮ ಪತ್ನಿ ಗೀತಾ ಪರ ಶಿವಮೊಗ್ಗ ಜಿಲ್ಲೆ ಜನತೆಯಲ್ಲಿ ಭಾವುಕವಾಗಿ ಮನವಿ ಮಾಡಿದ್ದಾರೆ. ಟಿಕೆಟ್‌ ಘೋಷಣೆ ಯ ನಂತರ ಗೀತಾ ಶಿವರಾಜ್‌ ಕುಮಾರ್‌ ಇದೇ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ನಂತರ ಶಿವಮೊಗ್ಗ ನಗರದ ಸಾಗರ ರಸ್ತೆ ಲಗಾನ್‌ ಕಲ್ಯಾಣ ಮಂದಿರದ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರು ಹಾಗೂ ಮುಖಂಡರ…

  • “ಮಿಸ್ ಗೈಡ್” ಮಾಡಿದ ಮಂಜುಕವಿ !

    ಸೀಟಡೀಲ್ ಫಿಲಂಸ್ ಹಾಗೂ ರಾಜ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಾಗರಾಜ್ ಹಾಗೂ ಸುಬ್ಬು ನಿರ್ಮಿಸಿರುವ ಮಿಸ್ ಗೈಡ್ ಚಿತ್ರಕ್ಕೆ ಮಂಜುಕವಿ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆ ಬರೆದು, ಸಂಗೀತವನ್ನು ನೀಡಿರುವ “ಮಿಸ್ ಗೈಡ್” ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಯಿತು. ಖ್ಯಾತ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಟೀಸರ್ ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಗಗನ್ ರಾಜ್ ಕೂಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಂತರ ಚಿತ್ರತಂಡದವರು “ಮಿಸ್ ಗೈಡ್” ಬಗ್ಗೆ ಮಾಹಿತಿ ನೀಡಿದರು. ಇದು ನಾನು ನಿರ್ದೇಶಿಸಿರುವ…