ದಾವಣಗೆರೆಯಲ್ಲಿನ ಬಿಜೆಪಿ ಬಂಡಾಯ ತಾತ್ಕಲಿಕ ಶಮನ : ಗಾಯತ್ರಿ ಸಿದ್ದೇಶ್ವರ್‌ ಗೆಲುವಿಗೆ ಶ್ರಮಿಸಿ ಎಂದು ಸೂಚನೆ ಕೊಟ್ಟ ಬಿಎಸ್‌ ವೈ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಗಾಯತ್ರಿ ಸಿದ್ದೇಶ್ವರ್ ಗೆ ಬಿಜೆಪಿ ಟಿಕೆಟ್‌ ಘೋಷಣೆಮಾಡಿದಾಗಿನಿಂದ ಜಿಲ್ಲಾ ಬಿಜೆಪಿಯಲ್ಲಿ ಎದ್ದಿದ್ದ ಬಂಡಾಯವನ್ನು ತಾತ್ಕಲಿಕವಾಗಿಶಮನಗೊಳಿಸುವಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಯಶಸ್ವಿಯಾಗಿದ್ದು, ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಸೂಚನೆ ನೀಡಲಾಗಿದೆ ತಿಳಿದು ಬಂದಿದೆ.

ಸಂಸದ ಜಿ. ಎಂ. ಸಿದ್ದೇಶ್ವರ ಹಾಗೂ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಎಸ್.‌ ಎ.
ರವೀಂದ್ರನಾಥ್ ಅವರ ಬಣದ ನಡುವೆ ‌  ನಗರದ ಅಪೂರ್ವ ರೆಸಾರ್ಟ್ ನಲ್ಲಿ ನಡೆಸಿದ
ಸಭೆಯಲ್ಲಿ ಸಂಧಾನ ಯಶಸ್ವಿಯಾಗಿದೆ.
ಸಭೆಯಲ್ಲಿ ರವೀಂದ್ರನಾಥ್, ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್,ಮಾಡಾಳ್ ಮಲ್ಲಿಕಾರ್ಜುನ, ಡಾ. ರವಿಕುಮಾರ್, ಬಸವರಾಜ್ ನಾಯ್ಕ ಸೇರಿದಂತೆ ಹಲವುಮುಖಂಡರು ಪಾಲ್ಗೊಂಡಿದ್ದರು.  ಬಿಎಸ್‌ ವೈ ಸಂಸದ ಸಿದ್ದೇಶ್ವರರ ಬಣ ಹೊರಗಿಟ್ಟು ಈ ಸಭೆ ನಡೆಸಿದರು. ಸಭೆಯ ಆರಂಭದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಬದಲಾವಣೆ ಆಗಲೇಬೇಕು ಎಂದು ರೇಣುಕಾಚಾರ್ಯ ಪಟ್ಟು ಹಿಡಿದರು. ಅದಕ್ಕೆ ಎಸ್‌. ಎ. ರವೀಂದ್ರನಾಥ್‌ ಸೇರಿದಂತೆ ಹಲವರು ಬೆಂಬಲ ಸೂಚಿಸಿದರು. ಆ ಬಳಿಕ ಯಡಿಯೂರಪ್ಪ ಅವರು, ದಾವಣಗೆರೆ
ಮಧ್ಯಕರ್ನಾಟಕದ ಹೆಬ್ಬಾಗಿಲು. ದಾವಣಗೆರೆ ಜಿಲ್ಲೆ ಆದಾಗಿನಿಂದ ಬಿಜೆಪಿ ಸೋತಿಲ್ಲ. ಈ
ಬಾರಿಯೂ ಸೋಲಬಾರದು. ಎಲ್ಲರೂ ಒಟ್ಟಾಗಿ ಗಾಯತ್ರಿ ಸಿದ್ದೇಶ್ವರ ಗೆಲುವಿಗೆ
ಪ್ರಯತ್ನಿಸಬೇಕು. ಮತ್ತೆ ಬಿಜೆಪಿ ಭದ್ರಕೋಟೆ ಎಂಬುದು ಸಾಬೀತಾಗಬೇಕು. ಈ ಮೂಲಕ
ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಲು ಎಲ್ಲರೂ ಸೇರಿ ಶ್ರಮಿಸಬೇಕು ಎಂದುಹೇಳಿದರು ಎನ್ನಲಾಗಿದೆ.

ReplyForwardAdd reaction

Posted

in

by

Tags:

Comments

Leave a Reply

Your email address will not be published. Required fields are marked *