ಹೋರಾಟ ನೆಲದಿಂದ ಚುನಾವಣಾ ರಣಕಹಳೆ ಮೊಳಗಿಸಿದ ಪ್ರಧಾನಿ

ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು, ಇದೇ ಮೊದಲ ಬಾರಿಗೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಿಂದಲೇ ಸೋಮವಾರ ಅಧಿಕೃತವಾಗಿ ಚುನಾವಣಾ ಪ್ರಚಾರ ಭಾಷಣ ಮಾಡುವ ಮೂಲಕ ರಣಕಹಳೆ ಮೊಳಗಿಸಿದರು.

ನಗರದ ಅಲ್ಲಮಪ್ರಭು ಮೈದಾನದಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಜನಸ್ತೋಮವನ್ನುದ್ದೇಸಿ ಬಹಿರಂಗ ಭಾಷಣ ಮಾಡಿದ ಅವರು,   ದೇಶದ ಹಿತಕ್ಕಾಗಿ ಕರ್ನಾಟಕದ ೨೮ ಸ್ಥಾನಗಳು ಸೇರಿ ಬಿಜೆಪಿಗೆ ೪೦೦ ಕ್ಕೂ ಹೆಚ್ಚು ಸ್ಥಾನಗಳು ಬೇಕಾಗಿದೆ. ಇಷ್ಟನ್ನು ನೀವು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.

ರಾಜ್ಯ ಸರ್ಕಾರ ಮತ್ತು  ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದ ಅವರು, ಸುಳ್ಳು ಹೇಳುವುದೇ ಕಾಂಗ್ರೆಸ್ ನ ಹುಟ್ಟುಗುಣವಾಗಿದೆ. ದಿನಕ್ಕೊಂದು ಸುಳ್ಳು, ಕ್ಷಣಕ್ಕೊಂದು ಸುಳ್ಳನ್ನು ಹೇಳುತ್ತಾ ಬರುತ್ತಿದೆ. ಸುಳ್ಳು ಹೇಳೋದು, ಮತ್ತಷ್ಟು ಸುಳ್ಳು ಹೇಳೋದು, ಆ ಸುಳ್ಳನ್ನು ಬೇರೆಯವರಿಗೆ ಕಟ್ಟುವುದು ಅವರ ಅಜೆಂಡಾ ಆಗಿದೆ ಎಂದು ಲೇವಡಿ ಮಾಡಿದರು.

ಕರ್ನಾಟಕವು ಕಾಂಗ್ರೆಸ್‌ ಪಕ್ಷಕ್ಕೆ ಎಟಿಎಂ ಆಗಿದೆ. ಜನರ  ಹಣವನ್ನು ಇಲ್ಲಿನ ಸರ್ಕಾರ ಲೂಟಿ ಮಾಡುತ್ತಿದೆ. ರಾಜ್ಯದ ಕಾಂಗ್ರೆಸ್ಸಿಗರು ಭ್ರಷ್ಟಚಾರದಲ್ಲಿ ತೊಡಗಿದ್ದಾರೆ. ಆ ಮೂಲಕ ಕೇಂದ್ರದ ಕಾಂಗ್ರೆಸ್ಸಿಗೆ ಹಣ ನೀಡುವ ಎಟಿಎಂ ಆಗಿದ್ದಾರೆ ಎಂದು ಆರೋಪಿಸಿದರಲ್ಲದೆ, ಬಡತನ ತೊಲಗಿಸಲು, ಭ್ರಷ್ಟಚಾರ ದೂರ ಮಾಡಲು, ಕೃಷಿ ಕಾರ್ಮಿಕರಿಗೆ, ಯುವಕರಿಗೆ ಶಕ್ತಿ ತುಂಬಲು ಕರ್ನಾಟಕದ ೨೮ ಸ್ಥಾನಗಳು ಸೇರಿದಂತೆ ಇಡೀ ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ೪೦೦ ಕ್ಕೂ ಹೆಚ್ಚು ಅಭ್ಯಾರ್ಥಿಗಳನ್ನು ಗೆಲ್ಲಿಸಿಕೊಡಿ ಎಂದು  ಮೋದಿ ಮನವಿ ಮಾಡಿದರು.

ಕಳೆದ ೧೦ ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ,
ಶಿವಾಜಿ ಪಾಠದಲ್ಲಿ ಹಿಂದೂ ಸಮಾಜದ ಶಕ್ತಿಯೇನು ಎಂಬುದು ಇದೆ. ಜೈ ಭವಾನಿ ಜೈ ಶಿವಾಜಿ ಘೋಷಣೆಯಿಂದ ಹಿಂದೂ ಸಮಾಜದ ರಕ್ಷಣೆ ಆಗಿದೆ. ಶಿವಾಜಿಯ ಹಿಂದಿನ‌ ಶಕ್ತಿಯೇ ಆಕೆಯ ತಾಯಿ. ಆ ತಾಯಿ ಒಬ್ವಳು ನಾರಿಯಾಗಿದ್ದಾಳೆ. ಆ ನಾರಿ ಶಕ್ತಿಯನ್ನು ಹೆಚ್ಚಿಸಬೇಕಿದೆ. ಅದಕ್ಕಾಗಿ ನಾವು ಹಲವು  ಯೋಜನೆ ರೂಪಿಸಿದ್ದೇವೆ ಎಂದು ಪ್ರತಿಪಾದಿಸಿದರು. ಕಾಂಗ್ರೆಸ್ಸ್‌ನಲ್ಲಿ ಅಜೆಂಡಾವೇ ಇಲ್ಲ ಎಂದು ದೂರಿದರು.

ಕಾಂಗ್ರೆಸ್ ಹಿಂದೂ ಸಮಾಜದ ಶಕ್ತಿಯನ್ನು ಮುಗಿಸಲು ಹೊರಟಿದೆ.‌ ಆ ಶಕ್ತಿಯನ್ನು ಉಳಿಸಲು ನಾವು ಸದಾ ಸಿದ್ದ .ಹಾಗಾಗಿ ಕರ್ನಾಟಕದ ಜನ ಕಾಂಗ್ರೆಸ್ ಗೆ  ಬುದ್ದಿ ಕಲಿಸಬೇಕಿದೆ. ಯುಪಿಐ ತಂತ್ರಜ್ಞಾನ, 5 ಜಿ ಇಂಟರ್ ನೆಟ್ ಗಳನ್ನು,   6000 ಕಿ.ಮಿ ರಾಷ್ಟ್ರೀಯ ಹೆದ್ದಾರಿಯನ್ನ ರಾಜ್ಯದಲ್ಲಿ ನಿರ್ಮಿಸಲಾಗಿದೆ. ಶಿವಮೊಗ್ಗದ ಕೋಟೆಗಂಗೂರಿನಲ್ಲಿ ರೈಲ್ವೆ ಜಂಕ್ಷನ್ ನಿರ್ಮಿಸಲಾಗುತ್ತಿದೆ. ಕಳೆದ 10 ವರ್ಷದಲ್ಲಿ ಗಮನಾರ್ಹ ಅಭಿವೃದ್ಧಿ ಮಾಡಲಾಗಿದೆ. ಈ ಅಭಿವೃದ್ದಿಗೆ ನಿಮ್ಮ ಬೆಂಬಲ ಬೇಕಿದೆ ಎಂದು ಜನತೆಯಲ್ಲಿ ಮನವಿ ಮಾಡಿದರು.

ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ, ದಾವಣಗೆರೆಯಲ್ಲಿ ಗಾಯಿತ್ರಿ ಸಿದ್ದೇಶ್, ಚಿಕ್ಕಮಗಳೂರಿನಲ್ಲಿ ಕೂಟಾ ಶ್ರೀನಿವಾಸ್ ಪೂಜಾರಿ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಡಾ.  ಮಂಜುನಾಥ್ ಸೇರಿದಂತೆ ಎಲ್ಲಾ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಬಿಜೆಪಿ ನೇತೃತ್ವದ ಎನ್ ಡಿಎ ಒಕ್ಕೂಟವನ್ನು 400 ರಡಿ ದಾಟಿಸಬೇಕೆಂದು ಕರೆ ನೀಡಿದರು.


Posted

in

by

Tags:

Comments

Leave a Reply

Your email address will not be published. Required fields are marked *