ಮೂರ್ನಾಲ್ಕು ವರ್ಷ ಬಂಧನದ ಬೇಡಿ ಕಳಚಿಕೊಳ್ಳಲು ರಮೇಶ್, ಸುರೇಶ್ ರೆಡಿಯಾಗಿದ್ದಾರೆ. ಇದೇ ತಿಂಗಳ ೨೧ಕ್ಕೆ ಅವರು ಬಂಧನದ ಬಿಡುಗಡೆಯ ಭಾಗ್ಯ ಪಡೆದಿದ್ದಾರೆ.
ಹಾಗಂತ ಇವರು ಯಾರು ಅಂತ ನೀವೇನು ತಲೆ ಕೆಡಿಸಿಕೊಳ್ಳಬೇಡಿ, ಇದು ಆರ್ ಕೆ ಟಾಕೀಸ್ ಲಾಂಛನದಲ್ಲಿ ಪಿ.ಕೃಷ್ಣ ಹಾಗೂ ಬಿ.ಶಂಕರ್ ಅವರು ನಿರ್ಮಾಣ ಮಾಡಿರುವ ಚಿತ್ರದ ಕಥಾ ನಾಯಕರು. ವಿಶೇಷ ಅಂದ್ರೆ ಇದು ಚಿತ್ರದ ಹೆಸರು ಕೂಡ.
ಶಿವಮೊಗ್ಗ ಮೂಲದ ನಾಗರಾಜ್ ಮಲ್ಲಿಗೇನಹಳ್ಳಿ ಹಾಗೂ ರಘುರಾಜ್ ಗೌಡ ನಿರ್ದೇಶನದಲ್ಲಿ ಗುಬ್ಬಿ ವೀರಣ್ಣ ಅವರ ಮರಿಮಗ ಬೆನಕ ಹಾಗೂ ಯಶು ರಾಜ್ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿರುವ ” ರಮೇಶ್ ಸುರೇಶ್” ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಇತ್ತೀಚಿಗೆ ಬಿಡುಗಡೆಯಾಯಿತು. ನಟರಾದ ಸಂತೋಷ್ ಆರ್ಯನ್, ನಾಗೇಂದ್ರ ಅರಸ್, ವಿಜಯ್ ಚೆಂಡೂರ್ ಮುಖ್ಯ ಅತಿಥಿಗಳಾಗಿ ಆಗಮಿಸಿ, ಚಿತ್ರಕ್ಕೆ ಶುಭ ಕೋರಿದ್ದಾರೆ.
ಇದೊಂದು ಕಾಮಿಡಿ ಜಾನರ್ ನ ಚಿತ್ರವಾದರೂ ಒಳ್ಳೆಯ ಸಂದೇಶವುಳ್ಳ ಚಿತ್ರ. ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಎಲ್ಲರೂ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎನ್ನುತ್ತಾರೆ ನಿರ್ದೇಶಕ ನಾಗರಾಜ್ ಮಲ್ಲಿಗೇನಹಳ್ಳಿ.ನಮ್ಮ ಚಿತ್ರದಲ್ಲಿ ಡಬ್ಬಲ್ ಮೀನಿಂಗ್ ಸಂಭಾಷಣೆಯಾಗಲಿ, ಅನವಶ್ಯಕ ಸನ್ನಿವೇಶಗಳಾಗಲಿ ಯಾವುದೂ ಇಲ್ಲ. ಜನರಿಗೆ ಬೇಸರವಾಗದಂತೆ ಉತ್ತಮ ಮನೋರಂಜನೆಯ ನೀಡುವ ಚಿತ್ರವಿದು. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎನ್ನುವುದು “ರಮೇಶ್ ಸುರೇಶ್” ಪಾತ್ರಧಾರಿಗಳಾದ ಬೆನಕ ಗುಬ್ಬಿ ವೀರಣ್ಣ ಹಾಗೂ ಯಶು ರಾಜ್ ಭರವಸೆಯ ಮಾತು..
ಚಿತ್ರದಲ್ಲಿ ಬಹುಭಾಷ ನಟ ಸತ್ಯಪ್ರಕಾಶ್, ನೀನಾಸಂ ರಂಗನಾಥ್, ಉಮಾ ಮುಂತಾದವರು ಈ ಚಿತ್ರದ ಕುರಿತು ಮಾತನಾಡಿದರು. ಚಂದನ ಸೇಗು ಈ ಚಿತ್ರದ ನಾಯಕಿ. ಸಾಧುಕೋಕಿಲ ಅವರು “ರಮೇಶ್ ಸುರೇಶ್” ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೂನ್ ೨೧ ಕ್ಕೆ ಚಿತ್ರ ತೆರೆಗೆ ಬರಲಿದೆ.