ಸುಸ್ಥಿರ ಅಭಿವೃದ್ಧಿಯತ್ತ ಎಲ್ಲರ ಚಿತ್ತವಿದ್ದಾಗ ಮಾತ್ರ ಪರಿಸರ ಸಂರಕ್ಷಣೆಯಾಗುವುದು, ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಾವೆಲ್ಲಾ ಸರಳ ಜೀವನದ ಸೂತ್ರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪರಿಸರ ಸ್ನೇಹಿ ಜೀವನ ನಡೆಸೋಣ ಎಂದು ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಾಗರಾಜ್ ಪರಿಸರ ಎಲ್ಲರಲ್ಲಿ ಕೇಳಿಕೊಂಡರು.
ಶಿವಮೊಗ್ಗದಸಹ್ಯಾದ್ರಿ ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಪರಿಸರ ವಿಜ್ಞಾನ ವಿಭಾಗದ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ ನಂತರ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ಅವರು, ಪರಿಸರ ದಿನಾಚರಣೆಯ ಮಹತ್ವ ಮತ್ತು ನಮ್ಮೆಲ್ಲರ ಜವಾಬ್ದಾರಿ ಏನು ಎಂಬುದರ ಕುರಿತು ತಿಳಿಸಿ, ಭೂಮಿ ಬರಡಾಗದಂತೆ, ಮರುಭೂಮಿಯಾಗದಂತೆ ನೋಡಿಕೊಂಡು ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸಿ ಬರ ಬರದ ಹಾಗೆ ಮಾಡಬೇಕಾಗಿದೆ ಎಂದು ಘೋಷ ವಾಕ್ಯದ ಕುರಿತು ತಿಳಿಸಿ, ಪರಿಸರಕ್ಕೆ ಹಾನಿಯಾಗುವ ಯಾವುದೇ ಯೋಜನೆಗಳನ್ನು ಮಾಡಲು ನಾವುಗಳು ಬಿಡಬಾರದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆÇ್ರ. ರಾಜೇಶ್ವರಿ.ಎನ್ ವಹಿಸಿ ನಮಗೆಲ್ಲರಿಗೂ ಜವಾಬ್ದಾರಿ ಇದೆ. ನಾವೆಲ್ಲ ನಾವಿರುವ ಸ್ಥಳಗಳಲ್ಲಿ ಸ್ವಚ್ಛತೆಗೆ ಮಹತ್ವ ನೀಡಬೇಕಾಗಿದೆ. ನಾವು ಬದುಕುವ ಜೊತೆ ಎಲ್ಲ ಜೀವಜಂತುಗಳಿಗೂ ಬದುಕಲು ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಿವಮೊಗ್ಗ ಹೆಚ್‍ಡಿಎಫ್‍ಸಿ ಕ್ಲಸ್ಟರ್ ಹೆಡ್ ಆಪರೇಷನ್ ಶಿವಾನಂದ್ ಮೂಡ್ವಿ ಹಾಗೂ ಕುಶಾಲಪ್ಪ ಭಾಗವಹಿಸಿದ್ದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ನಾಗರಾಜ್.ಎನ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಹಾ.ಮ.ನಾಗಾರ್ಜುನ, ಅರುಣ್ ಕುಮಾರ್.ಎನ್.ಸಿ ಉಪಸ್ಥಿತರಿದ್ದರು.
ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆ : ಡಾ. ನಾಗರಾಜ್ ಪರಿಸರ
RELATED ARTICLES
Recent Comments
Hello world!
on