Saturday, December 21, 2024
Google search engine
HomeUncategorizedಕೋಟೆ  ಮಾರಿಕಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಗೀತಾ ಶಿವರಾಜ್‌ ಕುಮಾರ್‌

ಕೋಟೆ  ಮಾರಿಕಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಗೀತಾ ಶಿವರಾಜ್‌ ಕುಮಾರ್‌

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರು ಪತಿ ಶಿವರಾಜ್‌ ಕುಮಾರ್‌ ಸಮೇತ್‌ ಮಂಗಳವಾರ ನಗರದ ಕೋಟೆ ಶ್ರೀ ಮಾರಿಕಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
 ದೇವಾಲಯದಲ್ಲಿ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಪತಿ ಶಿವರಾಜ್‌ಕುಮಾರ್‌ರವರೊಂದಿಗೆ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಬದಲಾವಣೆಗಾಗಿ ನನಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಕ್ಷೇತ್ರದ ಉದ್ದಕ್ಕೂ  ಉತ್ತಮ ವಾತಾವರಣ ಕಂಡು ಬರುತ್ತಿದೆ. ಅಪಾರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಮಹಿಳೆಯರು ಕೂಡ ಹೆಚ್ಚಾಗಿ ಬರುತ್ತಿದ್ದಾರೆ. ಗೆದ್ದೆ ಗೆಲ್ಲುತ್ತೇನೆ ಎಂಬ ವಿಶ್ವಾಸ ನನಗಿದೆ. ನನಗೊಂದು ಅವಕಾಶ ಕೊಡಿ. ನಾನು ಖಂಡಿತ ಮತದಾರರ ಋಣವನ್ನು ತೀರಿಸುತ್ತೇನೆ ಎಂದರು.
ಮಲೆನಾಡಿನ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಮೊದಲಿನಿಂದಲೂ ಈ ಬಗ್ಗೆ ನನಗೆ ಗೊತ್ತಿದೆ. ಅಡಕೆ ಬೆಳಗಾರರ ಸಮಸ್ಯೆ,ಮುಳುಗಡೆ ಸಂತ್ರಸ್ಥರ ಸಮಸ್ಯೆ, ಮಹಿಳೆಯರ ಸಮಸ್ಯೆಗಳು, ಸಾಗುವಳಿ ರೈತರ ಸಮಸ್ಯೆ, ಉದ್ಯೋಗದ ಸಮಸ್ಯೆ, ಕಾರ್ಖಾನೆಗಳ ಸಮಸ್ಯೆಗಳ ಬಗ್ಗೆ ಗೊತ್ತು. ಖಂಡಿತ ಇವೆಲವುಗಳನ್ನು ಪಟ್ಟಿ ಮಾಡಿಕೊಂಡಿರುವೆ ಎಂದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಈಗಾಗಲೇ ಅನುಷ್ಠಾನಗೊಂಡಿವೆ.  ಇವು ನಮ್ಮ ಕೈಹಿಡಿಯಲಿವೆ. ಜೊತೆಗೆ ಕೇಂದ್ರ ಮಟ್ಟದ ಕಾಂಗ್ರೆಸ್‌ನ ಗ್ಯಾರಂಟಿಗಳು ಕೂಡ ಜೊತೆಗಿವೆ. ವಾತಾವರಣ ಚೆನ್ನಾಗಿದೆ. ಗೆಲ್ಲುತ್ತೇವೆ ಎಂದರು.
ನಟ ಶಿವರಾಜ್‌ಕುಮಾರ್ ಮಾತನಾಡಿ,ಈಗಾಗಲೇ ಗೀತಾ ಅವರು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಮಲೆನಾಡಿನ ಸಮಸ್ಯೆಗಳ ಬಗ್ಗೆ ಅರಿವಿದೆ. ಶಕ್ತಿಧಾಮದ ಮೂಲಕ ಶೈಕ್ಷಣಿಕ ಸೇವೆಯನ್ನು ಮಾಡುತ್ತಿದ್ದಾರೆ. ಎಲ್ಲ ಕಡೆ ಉತ್ತಮ ವಾತಾವರಣವಿದೆ. ನಂಬಿಕೆ ನಮಗೆ ಇದೆ. ನಾವು ಗೆಲ್ಲುತ್ತೇವೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಹೆಚ್.ಎಸ್.ಸುಂದರೇಶ್, ಎಂ. ಶ್ರೀಕಾಂತ್, ಎಸ್.ಕೆ.ಮರಿಯಪ್ಪ, ಜಿ.ಡಿ.ಮಂಜುನಾಥ್, ಆರ್.ಪ್ರಸನ್ನಕುಮಾರ್, ಕಲಗೋಡು ರತ್ನಾಕರ್ ಮುಂತಾದವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments