Friday, December 20, 2024
Google search engine
HomeUncategorizedಅತೀಯಾದ ಆತ್ಮ ವಿಶ್ವಾಸವೇಕಾಂಗ್ರೆಸ್‌ ಸೋಲಿಗೆ ಕಾರಣವಾ?

ಅತೀಯಾದ ಆತ್ಮ ವಿಶ್ವಾಸವೇಕಾಂಗ್ರೆಸ್‌ ಸೋಲಿಗೆ ಕಾರಣವಾ?

ಎಲ್ಲಿ , ಏನಾಯ್ತು ? ಕಾಂಗ್ರೆಸ್‌ ಕಾರ್ಯಕರ್ತರು ಕನಲಿದ್ದಾರೆ. ಯಾಕೆಂದರೆ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಪಕ್ಷದ ಸೋಲನ್ನು ಅವರು ನಿರೀಕ್ಷೆ ಮಾಡಿರಲಿಲ್ಲ. ಅದಕ್ಕೆ ಕಾರಣವೂ ಸಾಕಷ್ಟಿದ್ದವು. ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಒಂದು ವ್ಯವಸ್ಥೆತ ಸಂಘಟಿತ ರೂಪದಲ್ಲಿ ಪ್ರಚಾರ ನಡೆಸಿದ್ದರು. ʼ ನಮ್ಮ ಬೂತು, ನಮ್ಮ ಜವಾಬ್ದಾರಿʼ ಎನ್ನುವ ಕಾರ್ಯತಂತ್ರವನ್ನು ಯಶಸ್ಚಿಯಾಗಿ ಜಾರಿಗೊಳಿಸಿದ್ದರು. ದೊಡ್ಡ ದೊಡ್ಡ ನಾಯಕರೇ ಪ್ರಚಾರದ ತಿರುಗಾಟ ನಿಲ್ಲಿಸಿ, ಈ ಕಾರ್ಯತಂತ್ರ ಪಳಗಿಸುವುದಕ್ಕಾಗಿಯೇ ತಮ್ಮ ತಮ್ಮ ವಾರ್ಡ್‌ ಗಳಲ್ಲಿ ಮೊಕ್ಕಾಂ ಹೊಡೆದು ಕುಳಿತಿದ್ದರು. ಮೇಲಾಗಿ ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಜಾರಿಯೂ ಜನರ ಬಳಿಗೆ ಹೋಗಲು ದೊಡ್ಡ ಅಸ್ತ್ರಗಳಾಗಿದ್ದವು. ಅಷ್ಟಾಗಿಯೂ ಪಕ್ಷದ ಅಭ್ಯರ್ಥಿಗೆ ಹೇಗೆ ಸೋಲಾಯಿತು? ಯಕ್ಷ ಪ್ರಶ್ನೆಯೊಂದು ಕಾರ್ಯಕರ್ತರನ್ನು ಕಾಡುತ್ತಿದೆ.

ಈ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು, ಅಭ್ಯರ್ಥಿ ಆಯ್ಕೆಯಲ್ಲಿಯೇ ಪಕ್ಷವು ಎಡವಿತ್ತು. ಸೂಕ್ತ ಅಭ್ಯರ್ಥಿಯನ್ನು ನಿಲ್ಲಿಸುವ ಅವಕಾಶ ವಿದ್ದರೂ, ಆ ಬಗ್ಗೆ ಆಲೋಚನೆ ಮಾಡದೆ ಒಮ್ಮೆ ಸೋತಿದ್ದ ಮತ್ತು ಪಕ್ಷದೊಳಗೆ ಅಷ್ಟಾಗಿ ಗುರುತಿಸಿಕೊಳ್ಳದ ವ್ಯಕ್ತಿಗೆ ಮಣೆ ಹಾಕಿದ್ದು ಪಕ್ಷದ ಸೋಲಿಗೆ ಪ್ರಮುಖ ಕಾರಣ ಎಂದು ದೂರಿದರು.ಇದು ಒಂದಷ್ಟು ಸತ್ಯವೂ ಹೌದು.

ಕಾಂಗ್ರೆಸ್‌ ಈ ಬಾರಿ ಹೊಸಬರಿಗೆ , ಗೆಲ್ಲುವ ಅಭ್ಯರ್ಥಿಗೆ ಅವಕಾಶ ನೀಡಬೇಕಿತ್ತು. ಅದರಲ್ಲೂ ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ಕ್ಷೇತ್ರದಲ್ಲಿ ದೊಡ್ಡ ಅವಕಾಶವೇ ಇತ್ತು. ಅದಕ್ಕೆ ಪೂರಕವಾಗಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ ಕಾಂಗ್ರೆಸ್‌ ಗೆಲುವು ನಿಶ್ಚಿತವೇ ಆಗಿತ್ತು. ಅದರಲ್ಲಿ ಕಾಂಗ್ರೆಸ್‌ ಯಡವಿದೆ. ಇನ್ನು ಕಾಂಗ್ರೆಸ್‌ ಚುನಾವಣೆ ಮೊದಲು ಮಾಜಿ ಶಾಸಕ ಕುಮಾರ್‌ ಬಂಗಾರಪ್ಪ ಅವರನ್ನು ಪಕ್ಷಕ್ಕೆ ಕರೆತಂದು ಅವರನ್ನೇ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಡಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆಗ ಕಾಂಗ್ರೆಸ್‌ ಕಾರ್ಯಕರ್ತರಲ್ಲಿಯೇ ಪರವಾದ ಮಾತುಗಳು ಕೇಳಿ ಬಂದಿದ್ದವು. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿನ ಹಾಲಿ ಸಂಸದರಿಗೆ ಪೈಪೋಟಿ ನೀಡಬೇಕಾದರೆ ಅದಕ್ಕೆ ಕುಮಾರ್‌ ಬಂಗಾರಪ್ಪ ಸೂಕ್ತ ಅಭ್ಯರ್ಥಿ ಎನ್ನುವ ಮಾತುಗಳು ಕಾಂಗ್ರೆಸ್‌ ಪಾಳಯದಲ್ಲೂ ಕೇಳಿ ಬಂದಿದ್ದವು. ಕುಮಾರ್‌ ಬಂಗಾರಪ್ಪ ಅವರನ್ನು ಕಾಂಗ್ರೆಸ್‌ ಗೆ ಕರೆತರುವ ಪ್ರಯತ್ನದ ಬಗ್ಗೆ ಒಮ್ಮೆ ಸಾಗರ ಶಾಸಕ ಗೋಪಾಲ ಕೃಷ್ಣ ಬೇಳೂರು ಅವರೇ ಮಾತನಾಡಿದ್ದರು.

ʼ ನಾವು ಅವರನ್ನು ಅಪ್ರೋಚ್‌ ಮಾಡಿದ್ದು ಸತ್ಯ. ಆದರೆ ಅವರೇ ಯಾಕೋ ದೂರು ಹೋಗುತ್ತಿದ್ದಾರೆʼ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಬೇಳೂರು ಅವರು ಹೇಳಿದಂತೆ ಕಾಂಗ್ರೆಸ್‌ ಪಕ್ಷವು ಕುಮಾರ್‌ ಬಂಗಾರಪ್ಪ ಅವರನ್ನ ಕರೆತರಲು ಯತ್ನ ನಡೆಸಿದ್ದು ನಿಜ, ಆದರೆ ಅದಕ್ಕೆ ವಿರೋಧ ವ್ಯಕ್ತವಾಗಿದ್ದ ಸಚಿವ ಮಧು ಬಂಗಾರಪ್ಪ ಅವರಿಂದ. ಜಿಲ್ಲೆಗೆ ಕುಮಾರ್‌ ಬಂಗಾರಪ್ಪ ನವರ ಅವಶ್ಯಕತೆ ಇಲ್ಲ, ಅವರನ್ನು ಕರೆತಂದರೆ ಕಾಂಗ್ರೆಸ್‌ ಗೆಲ್ಲುತ್ತದೆ ಎನ್ನುವ ಭ್ರಮೆ ಬೇಡ. ಅದೇ ಕೆಲಸವನ್ನು ನಾನೇ ಮಾಡುತ್ತೇನೆ, ಗೀತಾ ಶಿವರಾಜ್‌ ಕುಮಾರ್‌ ಅವರಿಗೆ ಟಿಕೆಟ್‌ ಕೊಟ್ಟರೆ, ಅವರನ್ನು ಗೆಲ್ಲಿಸಿಕೊಂಡು ಬರುವೆʼ ಎಂಬುದಾಗಿ ಸಚಿವ ಎಸ್.‌ ಮಧು ಬಂಗಾರಪ್ಪ ಅವರು ಹೈಕಮಾಂಡ್‌ ಗೆ ಆಶ್ವಾಸನೆ ಕೊಟ್ಟ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್‌ ಹೈಕಮಾಂಡ್‌ , ಗೀತಾ ಶಿವರಾಜ್‌ ಕುಮಾರ್‌ ಅವರಿಗೆ ಟಿಕೆಟ್‌ ನೀಡಿತು ಎನ್ನುವ ಮಾತುಗಳು ಕೂಡ ಆಗ ಕೇಳಿಬಂದಿದ್ದವು. ಟಕೆಟ್‌ ವಿಚಾರದಲ್ಲಿಯೇ ಕಾಂಗ್ರೆಸ್‌ ಪಕ್ಷದೊಳಗೆ ಇಷ್ಟೇಲ್ಲ ತಿಕ್ಕಾಟ ನಡೆದಿದ್ದವು. ಇನ್ನು ಚುನಾವಣೆ ಎದುರಿಸುವ ವಿಚಾರದಲ್ಲೂ ಸಚಿವರು, ಆತ್ಮ ವಿಶ್ವಾಸ ತೋರಿದ್ದು ಕೂಡ ಸೋಲಿಗೆ ಕಾರಣವಾಗಿದೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ. ಒಟ್ಟಾರೆ ಈಗ ಕಾಂಗ್ರೆಸ್‌ ಪಕ್ಷವು ತನ್ನ ಗ್ಯಾರೆಂಟಿ ಯೋಜನೆಗಳ ನಡುವೆಯೋ ಭಾರೀ ಅಂತರಗಳ ಸೋಲು ಅನುಭವಿಸಿದ್ದು ವಿಚಿತ್ರವೇ ಹೌದು.
…………………………

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments