c
ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಹೆಸರು ಹೇಳದಿದ್ದರೂ, ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ, ಗೀತಾ ಶಿವರಾಜ್ ಕುಮಾರ್ ಹಾಗೆಯೇ ನಟ ಶಿವರಾಜ್ ಕುಮಾರ್ ಅವರು, ಕುಮಾರ್ ಬಂಗಾರಪ್ಪ ಅವರು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಮಾಡಿದ್ದ ಟೀಕೆಗಳಿಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು,ವಿಚಿತ್ರವೇ ಎನಿಸಿತು. ಸಭೆಯನ್ನು ಅದಕ್ಕಾಗಿಯೇ ಕರೆದಂತೆ ಭಾಸವಾಯಿತು.
ಹೆಸರಿಗೆ ಇದು ಧನ್ಯವಾದ ಸಲ್ಲಿಕೆಯ ಸಭೆಯಾದರೂ, ಆ ನೆಪದಲ್ಲಿ ಪಕ್ಷ ಸೋಲಿಗೆ ಇದ್ದ ಕಾರಣಗಳ ಬಗ್ಗೆಯಾದರೂ ಸಭೆಯಲ್ಲಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬಹುದೆಂದು ಕಾರ್ಯಕರ್ತರು ನಿರೀಕ್ಷೆ ಮಾಡಿದ್ದರು. ಅದೇ ಬಗೆಯ ಕುತೂಹಲದಲ್ಲಿ ಹಲವು ನಾಯಕರು ಕೂಡ ಹಾಜರಿದ್ದರು. ಆದರೆ ಅಲ್ಲಿಗೆ ಬಂದಿದ್ದ ಬಹಳಷ್ಟು ಕಾರ್ಯಕರ್ತರಿಗೆ ನಿರಾಸೆ ಕಾದಿತ್ತು. ನಾಯಕರು ಸೋಲಿಗೆ ನಾಯಕರು ಸಮರ್ಥನೆ ನೀಡಿದ್ದು, ಮತ್ತೆ ಪ್ರತೀಕಾರದ ಮಾತುಗಳನ್ನಾಡಿದ್ದನ್ನು ಕೇಳಿದ ಕಾರ್ಯಕರ್ತರು ಕೊನೆಗೆ ಸಿಟ್ಟಾಗಿ, ಬರೀ ಭಾಷಣ ಮಾಡಬೇಡಿ, ಸೋಲಿಗೆ ಕಾರಣ ಏನು ಅನ್ನೋದರ ಬಗ್ಗೆಯೂ ಮಾತನಾಡಿ ಎಂದು ಬುದ್ದಿವಾದ ಹೇಳಿದ ಘಟನೆಯೂ ನಡೆಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ, ಸೋಲಿನ ಕಾರಣಗಳನ್ನು ಕುರಿತು ಮಾತನಾಡದೆ, ಪಕ್ಷದ ಅಭ್ಯರ್ಥಿಯ ಸೋಲು ಸೋಲಲ್ಲ ಎಂದು ಸಮರ್ಥಿಸಿಕೊಂಡರಲ್ಲದೆ, ಮುಂದೆ ತಮ್ಮ ಭಾಷಣವನ್ನು ಸಹೋದರ ಕುಮಾರ್ ಬಂಗಾರಪ್ಪ ಅವರನ್ನು ಪರೋಕ್ಷವಾಗಿ ಟೀಕಿಸುವುದಕ್ಕೆ ಮೀಸಲಿಟ್ಟರು., ಲೋಕಸಭೆ ಚುನಾವಣೆಯಲ್ಲಿನ ಪಕ್ಷದ ಸೋಲನ್ನು ಗಂಭೀರವಾಗಿಯೇ ತೆಗೆದುಕೊಂಡಂತೆ ಕಾಣಿಸಲಿಲ್ಲ.ಮತ್ತದೇ ತಮ್ಮ ದ್ವೇಷದ ಮಾತುಗಳನ್ನೇ ಕೃತಜ್ಞತಾ ಸಭೆಯಲ್ಲೂ ಮುಂದುವರೆಸಿದ್ದು, ವಿಚಿತ್ರ ಎನಿಸಿತು.
ʼ ರಾಜ್ಯದಲ್ಲಿ ಒಬ್ಬ ಸ್ಯಾಡಿಸ್ಟ್ ಇದ್ದಾನೆ. ಸಮಾಜದಲ್ಲಿ ಅವನನ್ನು ರಿಪೇರಿ ಮಾಡಲು ಆಗಲ್ಲ, ಪೂಜ್ಯ ತಂದೆಯವಾರದ ದಿವಂಗತ ಮಾಜಿ ಮುಖ್ಯಮಂತ್ರಿ ಎಸ್. ಬಂ ಅವರಿಂದಲೇ ಅವನನ್ನು ಸರಿ ಮಾಡಲು ಆಗಲಿಲ್ಲ, ನಾವು – ನೀವು ಪ್ರಯತ್ನ ಪಟ್ಟರೂ ರಿಪೇರಿ ಮಾಡಲು ಆಗಲಿಲ್ಲ , ಆತ ರಿಪೇರಿ ಆಗೋದಿಲ್ಲ ಎನ್ನುವ ಮೂಲಕ ಇತ್ತೀಚಿನ ಸೋಷಿಯಲ್ ಮೀಡಿಯಾ ಟೀಕೆಗಳ ಕುರಿತು ಸಹೋದರರೂ ಆದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಇದೆಲ್ಲ ಸಭೆಯಲ್ಲಿ ಯಾಕಾಗಿ ಹೇಳಬೇಕಿತ್ತೋ , ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದರು.
ಪರೋಕ್ಷ ಪ್ರತಿ ದಾಳಿಗೆ ಮೀಸಲಾಯಿತೇ ಕಾಂಗ್ರೆಸ್ ಕೃತಜ್ಞತಾ ಸಭೆ !?
RELATED ARTICLES
Recent Comments
Hello world!
on