Friday, January 10, 2025
Google search engine
HomeUncategorizedಕುಂಚೇನಹಳ್ಳಿಯಲ್ಲಿ ಗೀತಾ ಶಿವರಾಜ್‌ ಕುಮಾರ್‌ಯಗಾದಿ ಸಂಭ್ರಮ

ಕುಂಚೇನಹಳ್ಳಿಯಲ್ಲಿ ಗೀತಾ ಶಿವರಾಜ್‌ ಕುಮಾರ್‌ಯಗಾದಿ ಸಂಭ್ರಮ

ಹಾಡು ಹೇಳಿ, ಕುಣಿದು ತಾಂಡ ಜನರನ್ನು
ಭರಪೂರ ರಂಜಿಸಿದ ನಮ್ಮೂರ ಹುಡುಗ

………………………..

ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿ ಯಲ್ಲಿ ಮಂಗಳವಾರ ಯುಗಾದಿ ಸಂಭ್ರಮ ಜೋರಾಗಿತ್ತು. ಪಶ್ವಿಮದಲ್ಲಿ ಸೂರ್ಯ ಜಾರಿ, ನಸುಕತ್ತಲು ಆವರಿಸುವ ಹೊತ್ತಿಗೆ ತಾಂಡಾದ ಜನರು ಕನ್ನಡದ ಹೆಸರಾಂತ ನಟ ಶಿವರಾಜ್‌ ಕುಮಾರ್‌ ಹಾಗೂ ಅವರ ಪತ್ನಿ ಗೀತಾ ಶಿವರಾಜ್‌ ಕುಮಾರ್‌  ಅವರೊಂದಿಗೆ ಯುಗಾದಿ ಹಬ್ಬವನ್ನು ಸಂಭ್ರಮ ಸಡಗರದಲ್ಲಿ ಆಚರಿಸಿದರು.

ಕೆಳಗಿನ ಕುಂಚೇನಹಳ್ಳಿ ತಾಂಡದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ
ಮೇಲಿನ ಕುಂಚೇನಹಳ್ಳಿಯ ಸೇವಾಲಾಲ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು, ತೆರೆದ ವಾಹನದಲ್ಲಿ ವೇದಿಕೆ ಬಳಿಗೆ ಸಾಗಿದರು.

ಬಂಜಾರ ಸಮುದಾಯದ ಮಹಿಳೆಯರು ಗೀತಾ ಶಿವರಾಜಕುಮಾರ್ ಅವರಿಗೆ ಪ್ರೀತಿಯಿಂದ ಬರ ಮಾಡಿಕೊಂಡು ಆರತಿ ಬೆಳಗಿ ಸ್ವಾಗತಿಸಿದರು. ಅಲ್ಲಿನ ಜನರು ಶಿವಣ್ಣ ದಂಪತಿಗೆ ಹೂವಿನ ಮಳೆಗೆರೆದು, ಸಂತಸ ವ್ಯಕ್ತಪಡಿಸಿದರು. ಲಂಬಾಣಿ ಹಾಡಿಗೆ ಸ್ಥಳೀಯ ಯುವತಿಯರು ನೃತ್ಯ ಮಾಡಿದರು.

ನಟ ಶಿವರಾಜ್‌ ಕುಮಾರ್‌ ಅವರು ಯುಗಾದಿ ಸಂಭ್ರಮದ ವೇದಿಕೆ ಕಾರ್ಯಕ್ರಮ ವನ್ನು ಉದ್ಘಾಟಿಸಿದ ಬಳಿಕ ಸಚಿವ ಎಸ್.‌ ಮಧು ಬಂಗಾರಪ್ಪ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ, ತಮ್ಮ ತಂದೆಯವರಿಗೂ  ಕುಂಚೇನಹಳ್ಳಿ ಜನರಿಗೆ ಇದ್ದ ಒಡನಾಟ ಸ್ಮರಿಸಿಕೊಂಡರು.

ನಮ್ಮ ತಂದೆ ಬಂಗಾರಪ್ಪನವರೆಂದರೆ ಈ ತಾಂಡಾದ ಜನರಿಗೆ ಬಹಳ ಪ್ರೀತಿ. ನಮ್ಮ ತಂದೆಯವರಿಗೂ ಅಷ್ಟೇ. ನಾವೆಲ್ಲಾ ತಂದೆಯ ಕಾರಿನಲ್ಲಿ ಓಡಾಡುವಾಗ ಈ ಭಾಗದ ಜನರ ಪ್ರೀತಿ ಕಂಡಿದ್ದೇನೆ. ಈಗ ನಮ್ಮ ತಂದೆ ಇಲ್ಲ. ಆದರೆ, ನಿಮ್ಮಲ್ಲಿಯೇ ಅವರನ್ನು ಕಾಣುತ್ತಿದ್ದೇನೆ. ನೀವೇ ನಮ್ಮ, ಅಪ್ಪ ಅಮ್ಮ. ನಿಮ್ಮ ಪ್ರೀತಿ ನಮ್ಮ ಮೇಲಿರಲಿ ಎಂದರು.

ಬಿಜೆಪಿ ಪಕ್ಷದವರು ದೇವರನ್ನು ಬೀದಿಗೆ ತಂದು ಮತ ಕೇಳುತ್ತಿದ್ದಾರೆ. ಇದು ರಾಜಕೀಯದಲ್ಲಿ ಸಲ್ಲದು. ನಾವೂ ಕೂಡ ದೇವರ ಭಕ್ತರೆ. ಇಲ್ಲಿ ನ್ಯಾಯ, ನೀತಿ, ಸತ್ಯ, ಧರ್ಮ ಮಾತ್ರ ಗೆಲ್ಲಬೇಕು. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಬಡವರ ಹಸಿವು ನೀಗಿಸಲಾಗುತ್ತಿದೆ. ಇಲ್ಲಿ ಕಷ್ಟಕ್ಕೆ ಸ್ಪಂದಿಸಿದವರಿಗೆ ಮತ ಚಲಾಯಿಸಬೇಕು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, ಕುಂಚೇನಹಳ್ಳಿಗೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ನಟ ರಾಜ್ ಕುಮಾರ್ ಕುಟುಂಬ ಸದಸ್ಯರು ಭೇಟಿ ನೀಡಿದ್ದಾರೆ. ಇದು, ನಮ್ಮ ಸೌಭಾಗ್ಯ ಎಂದರು.
ದೇಶದಲ್ಲಿ ಬಿಕ್ಷಾಟನೆ ನಡೆಸದೆ ಸ್ವಾಭಿಮಾನದ ಬದುಕನ್ನು ಬಂಜಾರ ಸಮುದಾಯ ಸಾಗಿಸುತ್ತಿದೆ. ಇಲ್ಲಿನ ಸಮಸ್ಯೆಗಳನ್ನು ನೀಗಿಸಲು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಇಲ್ಲ ಎನ್ನುವುದನ್ನು ತೊಡೆದು ಹಾಕಿ, ಅವರ ಸ್ಥಾನವನ್ನು ಗೀತಾ ಶಿವರಾಜಕುಮಾರ್ ಅವರು ತುಂಬಲಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ ಕರಿಯಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಅನಿತಾ ಕುಮಾರಿ, ಎಂ.ಶ್ರೀಕಾಂತ್, ಎಸ್. ರವಿಕುಮಾರ್, ಕಲಗೋಡು ರತ್ನಾಕರ್, ಎಸ್.ಕೆ. ಮರಿಯಪ್ಪ, ವೈ.ಹೆಚ್. ನಾಗರಾಜ್, ಜಗದೀಶ್, ಹೊಳೆಹೊನ್ನೂರು ಹನುಮಂತು, ಕೆ.ಜೆ. ನಾಗೇಶ್ ನಾಯ್ಕ್, ಲೇಖನಾ, ಶಾಂತವೀರ ನಾಯ್ಕ, ಆಯನೂರು ಸಂತೋಷ್, ಶರತ್ ಮರಿಯಪ್ಪ ಸೇರಿ ಬಂಜಾರದ ಸಮುದಾಯದ ಮುಖಂಡರು ಇದ್ದರು.

ಕೋಟ್ಸ್‌
ಕಾಂಗ್ರೆಸ್ ಸರ್ಕಾರದ ಮೂಲ ಉದ್ದೇಶ ಬಡತನ ನಿರ್ಮೂಲನೆ ಹಾಗೂ ಬಡ ಕುಟುಂಬಗಳ ಹಸಿವು ನೀಗಿಸುವುದು. ಅದೇ, ಉದ್ದೇಶದಿಂದ ಲೋಕಸಭಾ ಚುನಾವಣೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜನ ಸಾಮಾನ್ಯರಿಗೆ ಪೂರಕವಾದ ಯೋಜನೆಗಳನ್ನು ಘೋಷಿಸಲಾಗಿದೆ. ಪ್ರತಿಜನರಿಗೂ ಅನುಕೂಲವಾಗುವಂತಹ ಗ್ಯಾರೆಂಟಿ ಯೋಜನೆಗಳು ಪ್ರಣಾಳಿಕೆಯಲ್ಲಿದ್ದು, ಜನರು ನನಗೆ ಆಶೀರ್ವಾದ ಮಾಡಿ.
–  ಗೀತಾ ಶಿವರಾಜಕುಮಾರ್, ಕಾಂಗ್ರೆಸ್ ಅಭ್ಯರ್ಥಿ

ReplyForwardAdd reaction
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments