Sunday, December 22, 2024
Google search engine
Homeಮನರಂಜನೆಅಂದು ವಿಲನ್‌, ಇಂದು ಹೀರೋ, ಮಗದೀರ ವಿಲನ್‌ಗೂ ಬಂತು ಬಂಪರ್‌ ಆಫರ್‌ !

ಅಂದು ವಿಲನ್‌, ಇಂದು ಹೀರೋ, ಮಗದೀರ ವಿಲನ್‌ಗೂ ಬಂತು ಬಂಪರ್‌ ಆಫರ್‌ !

ತೆಲುಗು ಚಿತ್ರರಂಗದ ಸೂಪರ್ ಹಿಟ್ ಮಗಧೀರ ಸಿನಿಮಾದಲ್ಲಿ ರಣದೇವ್ ಬಿಲ್ಲಾ ಎನ್ನುವ  ಖಳನಾಯಕನ ಪಾತ್ರದಲ್ಲಿ ಮಿಂಚಿದ್ದ ನಟ ದೇವ್ ಗಿಲ್ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ‘ಅಹೋ ವಿಕ್ರಮಾರ್ಕ’ ಸಿನಿಮಾದಲ್ಲಿ ದೇವ್ ಗಿಲ್ ನಾಯಕನಟನಾಗಿ ನಟಿಸುತ್ತಿದ್ದು, ಆಗಸ್ಟ್ 30 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರಿಲೀಸ್ ಆಗ್ತಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗಿದೆ.

ಕನ್ನಡದಲ್ಲಿಯೂ ರಿಲೀಸ್ ಆಗಲಿರುವ ಅಹೋ ವಿಕ್ರಮಾರ್ಕ ಪ್ರಚಾರಕ್ಕಾಗಿ ದೇವ್ ಗಿಲ್ ಬೆಂಗಳೂರಿಗೆ ಆಗಮಿಸಿದ್ದರು. ನಗರ ಊರ್ವಶಿ ಚಿತ್ರ ಮಂದಿರದಲ್ಲಿ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಮೀನಾಕ್ಷಿ ಸಾಂಗ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಸಾಥ್ ಕೊಟ್ಟರು.  

ಸಂಗೀತ ನಿರ್ದೇಶಕ ರವಿ ಬಸ್ರೂರ್ ಮಾತನಾಡಿ, ದೇವ್ ಗಿಲ್ ಸ್ಕ್ರೀನ್ ನಲ್ಲಿ ನೋಡಿದಾಗ ಭಯವಾಗುತ್ತಿತ್ತು. ನಮ್ಮ ಮನೆಗೆ ಬಂದಾಗ ಅವರ ಸರಳತೆ ಹಾಗೂ ವಿನಯತೆ ನನಗೆ ಇಷ್ಟವಾಯ್ತು. ಒಂದು ಸಿನಿಮಾದಿಂದ 3 ರಿಂದ 4ವರೆ ಸಾವಿರ ಕುಟುಂಬ ಬದುಕುತ್ತಾರೆ. ಅವರು ಬಂದು ನಾವು ವಿಭಿನ್ನ ರೀತಿಯಲ್ಲಿ ಟ್ರೈ ಮಾಡಿದ್ದೇವೆ. ನಿಮ್ಮ ಸಪೋರ್ಟ್ ಬೇಕು ಎಂದಾಗ ಇದರಿಂದ ಒಂದಷ್ಟು ಜನ ಬದುಕುತ್ತಾರೆ ಇದಕ್ಕೆ ದಾರಿಯಾಗಲು ನಾನು ಈ ಚಿತ್ರಕ್ಕೆ ಸಾಥ್ ಕೊಟ್ಟಿದ್ದೇನೆ. ಸಿನಿಮಾ ಮೇಲೆ ಅವರಿಗೆ ತುಂಬಾನೇ ಪ್ರೀತಿ ಇದೆ. ಥಿಯೇಟರ್ ನಲ್ಲಿ ಅಹೋ ವಿಕ್ರಮಾರ್ಕ್  ಚಿತ್ರ ಬೇರೆ ರೀತಿಯ ಅನುಭವ ನೀಡಲಿದೆ ಎಂದರು.
………..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments