ದೇಶದಲ್ಲಿ ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಶನಿವಾರ ಸಂಜೆ ಮುಕ್ತಾರವಾಗುತ್ತಿದ್ದಂತೆಯೇ ವಿವಿಧ ಸಂಸ್ಥೆಗಳ ಮತದಾನೋತ್ತರ ಸಮೀಕ್ಷೆಗಳು ಹೊರ ಬಿದ್ದಿದ್ದು, ಕೇಂದ್ರ ದಲ್ಲಿ ಎನ್ ಡಿಎ ಮತ್ತೆ ಅಧಿಕಾರಕ್ಕೆ ಬರುವ ಬಗ್ಗೆ ಭವಿಷ್ಯ ನುಡಿದಿವೆ.
ಅನೇಕ ಸಂಸ್ಥೆಗಳು ಎನ್ ಡಿ ಎಮೈತ್ರಿಕೂಟವು ೩೫೦ ಕ್ಕೂ ಹೆಚ್ಚು ಸ್ಥಾನ ಪಡೆಯಲಿವೆ ಎಂದು ಹೇಳಿವೆ . ಹಾಗೆಯೇ ಇಂಡಿಯಾ ಮೈತ್ರಿಕೂಟವು ೧೫೦ ಸ್ಥಾನ ಪಡೆಯಲಿದ್ದು, ಇತರರು ೩೦ ಸ್ತಾನ ಪಡೆಯಲಿವೆ ಎಂದು ಹೇಳಿವೆ.
ಇದೇ ರೀತಿ ಕರ್ನಾಟಕದಲ್ಲಿ ಬಿಜೆಪಿ ೧೮ ರಿಂದ ೨೦ ಸ್ತಾನ ಪಡೆಯುವ ಬಗ್ಗೆಯೂಭವಿಷ್ಯ ನುಡಿದಿವೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವು ೩ ರಿಂದ ೮ ಸ್ತಾನ ಪಡೆಯಲಿದ್ದು, ಜೆಡಿಎಸ್ ೨ ಸ್ತಾನ ಪಡೆಯಲಿದೆ ಎಂದು ಹೇಳಿವೆ.