Sunday, December 22, 2024
Google search engine
HomeUncategorizedಪರಿಷತ್ : ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಆದ ಮತದಾನ ಎಷ್ಟು ಗೊತ್ತಾ?

ಪರಿಷತ್ : ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಆದ ಮತದಾನ ಎಷ್ಟು ಗೊತ್ತಾ?

ದಾವಣಗೆರೆ: ವಿಧಾನ ಪರಿಷತ್‍ನ ಆಗ್ನೇಯ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಕ್ಕೆ ಜೂನ್ 3 ರಂದು ನಡೆದ ಮತದಾನದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಶೇ 92.93, ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ 87.74, ಪದವೀಧರರ ಕ್ಷೇತ್ರಕ್ಕೆ ಶೇ 80.95 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.


ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕುಗಳು ಸೇರಲಿದ್ದು ಒಟ್ಟು 7 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು 2795 ಪುರುಷ, 1556 ಮಹಿಳೆ ಸೇರಿ ಒಟ್ಟು 4351 ಮತದಾರರಿಗೆ 4054 ಮತದಾನವಾಗಿ ಶೇ 93.17 ರಷ್ಟು ಮತದಾನವಾಗಿದೆ. ಮತದಾನ ಮಾಡಿದವರಲ್ಲಿ ಪುರುಷ 2608, ಮಹಿಳಾ 1446 ಮತದಾರರಿದ್ದಾರೆ.
ನೈರುತ್ಯ ಶಿಕ್ಷಕರ ಕ್ಷೇತ್ರವು ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲ್ಲೂಕುಗಳು ಸೇರಲಿದ್ದು 979 ಒಟ್ಟು ಮತದಾರರು, 4 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು 648 ಪುರುಷ, 211 ಮಹಿಳೆಯರು ಮತದಾನ ಮಾಡಿದ್ದು ಒಟ್ಟು 859 ಮತದಾನ ಮಾಡಿ ಶೇ 87.74 ರಷ್ಟು ಮತದಾನವಾಗಿದೆ.
ನೈರುತ್ಯ ಪದವೀಧರರ ಕ್ಷೇತ್ರದ ವ್ಯಾಪ್ತಿಗೆ ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲ್ಲೂಕುಗಳು ಸೇರಿದ್ದು 4288 ಪುರುಷ, 2270 ಮಹಿಳೆಯರು ಸೇರಿ ಒಟ್ಟು 6558 ಮತದಾರರಲ್ಲಿ 8 ಮತಗಟ್ಟೆಗಳಿಂದ 3545 ಪುರುಷ, 1764 ಮಹಿಳೆಯರು ಸೇರಿ ಒಟ್ಟು 5309 ಮತ ಚಲಾಯಿಸಿ ಶೇ 80.95 ರಷ್ಟು ಮತದಾನವಾಗಿದೆ.
ಮತ ಎಣಿಕೆಯು ಜೂನ್ 6 ರಂದು ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments