Sunday, December 22, 2024
Google search engine
HomeUncategorizedನಾನ್ ವೈಲೆನ್ಸ್ ಗೆ ಶಿವಣ್ಣ ಸಾಥ್ !

ನಾನ್ ವೈಲೆನ್ಸ್ ಗೆ ಶಿವಣ್ಣ ಸಾಥ್ !

ತಮಿಳಿನ ಮೆಟ್ರೋ ಖ್ಯಾತಿಯ ನಿರ್ದೇಶಕ ಆನಂದ್ ಕೃಷ್ಣನ್ ಆಕ್ಷನ್ ಕಟ್ ಹೇಳುತ್ತಿರುವ ನಾನ್ ವೈಲೆನ್ಸ್ ಸಿನಿಮಾಗೆ ಸ್ಯಾಂಡಲ್ ವುಡ್ ಮಾಸ್ ಲೀಡರ್ ಶಿವರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶಿವಣ್ಣ ಇಡೀ ತಂಡಕ್ಕೆ ಶುಭಾಷಯ ತಿಳಿಸಿದ್ದಾರೆ. ಮೆಟ್ರೋ ಶಿರೀಶ್, ಬಾಬಿ ಸಿಂಹ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸುತಿದ್ದು, ಅದಿತಿ ಬಾಲನ್, ಗರುಡ ರಾಮ್, ಆದಿತ್ಯ ಕಥಿರ್ ತಾರಾಬಳಗದಲ್ಲಿದ್ದಾರೆ.

90ರ ದಶಕದಲ್ಲಿ ಮಧುರೈ ಜೈಲಿನೊಳಗೆ ಸಂಭವಿಸುವ ಘಟನೆಗಳ ಸುತ್ತ ಪ್ರಧಾನವಾಗಿ ಸುತ್ತುವ ಒಂದು ಆಕರ್ಷಕ ಚಿತ್ರಕಥೆಯನ್ನು ಆನಂದ್ ರಚಿಸಿದ್ದಾರೆ. ‘ಮೆಟ್ರೋ’ ಮತ್ತು ‘ಕೊಡಿಯಲ್ಲಿ ಒರುವನ್’ ಚಿತ್ರಗಳ ಸತತ ಗೆಲುವಿನ ನಂತರ ನಿರ್ದೇಶಕ ಆನಂದ ಕೃಷ್ಣನ್ ಈ ಚಿತ್ರದ ಮೂಲಕ ಹ್ಯಾಟ್ರಿಕ್ ಯಶಸ್ಸನ್ನು ತಮ್ಮದಾಗಿಸಿಕೊಳ್ಳವ ನಿರೀಕ್ಷೆಯಲ್ಲಿದ್ದಾರೆ.

ನಾನ್ ವೈಲೆನ್ಸ್ ಚಿತ್ರೀಕರಣ ಮುಕ್ತಾಯ ಹಂತಕ್ಕೆ ಬಂದಿದೆ. ಶೀಘ್ರದಲ್ಲೇ ಚಿತ್ರದ ಟೀಸರ್ ಮತ್ತು ಟ್ರೇಲರ್ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಾಗುವುದು. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಎಕೆ ಪಿಕ್ಚರ್ಸ್ ನಡಿ ಲೇಖಾ ನಾನ್ ವೈಲೆನ್ಸ್ ಸಿನಿಮಾ ನಿರ್ಮಾಣ ಮಾಡುತ್ತಿದ್ದು, 90ರ ದಶಕವನ್ನು ಮರುಸೃಷ್ಟಿಸಲು ಚಿತ್ರತಂಡ ಭಾರೀ ಶ್ರಮವಹಿಸುತ್ತಿದೆ. ಯುವನ್ ಶಂಕರ್ ರಾಜ್ ಸಂಗೀತ, ಎನ್ ಎಸ್ ಉದಯ್ ಕುಮಾರ್ ಛಾಯಾಗ್ರಹಣ, ಶ್ರೀಕಾಂತ್ ಎನ್ ಬಿ ಸಂಕಲನ ಚಿತ್ರಕ್ಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments