ವಿವಿಪ್ಯಾಟ್ಗಳಿಗೆ ಬಿಗಿ ಭದ್ರತೆ | ಸಿಸಿ ಟಿವಿ ಕ್ಯಾಮೆರಾ ಕಣ್ಣಾವಲು
ಶಿವಮೊಗ್ಗ: ಇಲ್ಲಿನ ಲೋಕಸಭಾ ಕ್ಷೇತ್ರಕ್ಕೆ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಮಾಡಿದ ಮತಯಂತ್ರ, ವಿವಿಪ್ಯಾಟ್ಗಳನ್ನು ಜಿಲ್ಲಾ ಚುನಾವಣಾಧಿಕಾರಿ ಸಮ್ಮುಖದಲ್ಲಿ ಮತ ಎಣಿಕೆ ಕೇಂದ್ರದೊಳಗೆ ಸೀಲ್ ಮಾಡಿದ ಅನೇಕ ಬಾಕ್ಸ್ಗಳನ್ನು ಭದ್ರತಾ ಕೊಠಡಿಗಳ ಒಳಗಿಟ್ಟು ಬೀಗ ಮುದ್ರೆ ಹಾಕಲಾಯಿತು.
ನಗರದ ಸಹ್ಯಾದ್ರ ಕಾಲೇಜಿನ ಕಟ್ಟಡದಲ್ಲಿ ಜೂ. 4ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ನಂತರ ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಇದಕ್ಕಾಗಿ ನಿರ್ಮಿಸಿರುವ ಭದ್ರತಾ ಕೊಠಡಿಗಳಲ್ಲಿ ಈಗಾಗಲೇ ಸೂಕ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕೇಂದ್ರದ ಹೊರಗೂ, ಒಳಗೂ ಸರ್ಪಗಾ ವಲು ನಿರ್ಮಾಣವಾಗಿದೆ. ಭದ್ರತಾ ಕೊಠಡಿಗಳಿಗೆ ಡಬಲ್
ಲಾಕ್ ಮಾಡಲಾಗಿದೆ. ಮಾಸ್ಟರ್ ಕೀಗಳನ್ನು ಹೊಂದಿರುವ ಆರ್ಒ ಹಾಗೂ ಮತ್ತೊಂದನ್ನು ಹೊಂದಿರುವ ಆಯಾ ಕ್ಷೇತ್ರಗಳ ಎಆರ್ಒಗಳು 4ರಂದು ಎಣಿಕೆ ಆರಂಭವಾಗುವ ಮುನ್ನ ಸ್ಟಾಂಗ್ ರೂಂಗಳ ಬೀಗ ಮುದ್ರೆಯನ್ನು ತೆರವುಗೊಳಿಸಲಿದ್ದಾರೆ.
ಸಿಸಿ ಟಿವಿ ಕ್ಯಾಮೆರಾ ಕಣ್ಣಾವಲು: ಎಣಿಕೆ ಕೇಂದ್ರಗಳ ಸುತ್ತ 3 ಸುತ್ತಿನ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸಿಸಿ ಟಿವಿ ಕ್ಯಾಮೆರಾಗಳ ಕಣ್ಣಾವಲಿದೆ. ಆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಸಿಎಪಿಎಫ್, ಡಿಎಆರ್ ತುಕಡಿಗ” ನ ಬಳಸಿಕೊಳ್ಳಲಾಗಿದೆ. ಬೆಸ್ಕಾಂ, ಒ ಅಗ್ನಿಶಾಮಕ ಸಿಬ್ಬಂದಿ ಕೂಡ ಮೊಕ್ಕಾಂ ಹೂಡಿದ್ದಾರೆ.
ಬಾಕ್ಸ್ :
ಶಿವಮೊಗ್ಗ: ನಗರದ ಸಹ್ಯಾದ್ರಿ ಕಲಾ ಕಾಲೇಜಿ ನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕಾ ಕೇಂದ್ರಕ್ಕೆ ಮತಯಂತ್ರ ಗಳನ್ನು ಇರಿಸಲಾಗಿದ್ದು, ಜಿಲ್ಲಾ ಚುನಾವಣಾಧಿಕಾರಿ ಗಳು ಮತ್ತು ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಸೀಲ್ ಮಾಡಲಾಯಿತು. ಇಡೀ ಕಾಲೇಜಿನ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ