Saturday, December 21, 2024
Google search engine
HomeUncategorizedಏ. 12ಕ್ಕೆ ನಾಮಪತ್ರ ಸಲ್ಲಿಕೆ-18ಕ್ಕೆ  ಬಹಿರಂಗ ಸಭೆ : ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಜಿ.ಬಿ.ವಿನಯ್‌ ಕುಮಾರ್...

ಏ. 12ಕ್ಕೆ ನಾಮಪತ್ರ ಸಲ್ಲಿಕೆ-18ಕ್ಕೆ  ಬಹಿರಂಗ ಸಭೆ : ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಜಿ.ಬಿ.ವಿನಯ್‌ ಕುಮಾರ್ ಘೋಷಣೆ

ದಾವಣಗೆರೆ ಲೋಕ ಸಭಾ ಕ್ಷೇತ್ರದ 8 ತಾಲೂಕುಗಳಲ್ಲಿ ಜನಾಭಿಪ್ರಾಯ ಸಂಗ್ರಹದ ಪ್ರವಾಸ ಕೈಗೊಂಡ ನಂತರ ಮತದಾರರ ಅಭಿಪ್ರಾಯದ ಮೇರೆಗೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣ್ಕಕೆಇಳಿಯಲು ನಿರ್ಧಾರ ಕೈಗೊಂಡಿದ್ದೇನೆ. ಏಪ್ರಿಲ್‌ 12ರಂದು ನಾಮಪತ್ರ ಸಲ್ಲಿಸಿ, 18ರಂದು ಬೃಹತ್‌ ಬಹಿರಂಗ ಸಭೆ ನಡೆಸುತ್ತೇನೆಂದು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಜಿ.ಬಿ.ವಿನಯ್‌ ಕುಮಾರ್ ಘೋಷಣೆ  ಮಾಡಿದ್ದಾರೆ.

ನಗರದ ಎಸ್.ಎಸ್. ಬಡಾವಣೆಯ ತಮ್ಮ ಗೃಹ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲಿ ಅಧಿಕಾರ, ಆಸ್ತಿ, ಅವಕಾಶಗಳು ಕೇವಲ ಎರಡು ಕುಟುಂಬಗಳ ಹಿಡಿತದಲ್ಲಿವೆ. ಟಿಕೆಟ್‌ ತರುವುದರಿಂದ ಹಿಡಿದು ಎಲ್ಲವನ್ನೂ ಅವರೇ ನಿರ್ಧರಿಸುತ್ತಾರೆ. ರಾಜಕೀಯ ಅಧಿಕಾರದಿಂದ ಬಂಡವಾಳ, ಆಸ್ತಿ ಮಾಡುವುದೇ ಎರಡು ಕುಟುಂಬಗಳ ಮೊದಲ ಆದ್ಯತೆ. ಜನಸೇವೆ ಅವರ ಕೊನೆಯ ಆಧ್ಯತೆಯಾಗಿದೆ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಮತದಾರರು ಎರಡೂ ಪಕ್ಷಗಳ ಕುಟುಂಬ ರಾಜಕಾರಣದಿಂದ ಬೇಸತ್ತಿದ್ದಾರೆ. ಮತದಾರರ ಒಲವು ನನ್ನ ಕಡೆ ಇದೆ. ಈ ಬಾರಿ ದಾವಣಗೆರೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬೀಳಲಿದೆ ಕಾದು ನೋಡಿ: ಜಿ.ಬಿ.ವಿನಯ್‌ ಕುಮಾರ್ ತಮ್ಮ ಗೆಲವಿನ ಬಗ್ಗೆ ಭರವಸೆ ವ್ಯಕ್ತಪಡಿಸಿದರು.

ದಾವಣಗೆರೆ ನಗರದಲ್ಲಿ ಆವರ ಆಸ್ತಿಗಳು ಕಾಣುತ್ತವೆ. ದಾವಣಗೆರೆ ನಗರದೊಳಗೆ ಹಿಂದುಳಿದ ಬಡಾವಣೆ, ಮುಂದುವರೆದ ಬಡಾವಣೆಗಳಿವೆ. ನಗರ ಪ್ರದೇಶಕ್ಕೂ ಗ್ರಾಮೀಣ ಪ್ರದೇಶಕ್ಕೂ ಎಲ್ಲಾ ಕ್ಷೇತ್ರಗಳಲ್ಲೂ ಅಸಮಾನತೆ ಎದ್ದು ಕಾಣುತ್ತದೆ. ಅದರಲ್ಲೂ ಜಗಳೂರು, ಹರಪನಹಳ್ಳಿ ತಾಲೂಕುಗಳು ಬಹಳಷ್ಟು ಹಿಂದುಳಿದಿವೆ. ರಾಜಕೀಯ, ಆರ್ಥಿಕತೆ, ಅವಕಾಶ ಎಲ್ಲವೂ ದಾವಣಗೆರೆ ನಗರದಲ್ಲಿ ಕೇಂದ್ರಕರಣಗೊಂಡಿದವೆ. ಅದು ವಿಕೇಂದ್ರಿಕರಣಗೊಳ್ಳಬೇಕು. ಯುವಕರು ರಾಜಕಾರಣಕ್ಕೆ ಬಂದು ಜನಮುಖಿ ರಾಜಕಾರಣ ಮಾಡಬೇಕೆಂಬುದು ನನ್ನ ಗುರಿ. ಅದಕ್ಕಾಗಿ ಏಪ್ರಿಲ್‌ 12ರಂದು ನಾಮಪತ್ರ ಸಲ್ಲಿಸುತ್ತೇನೆ. 18 ರಂದು ನಗರದಲ್ಲಿ ಬೃಹತ್‌ ಬಹಿರಂಗ ಸಭೆ ನಡೆಸುವ ಮೂಲಕ ಚುನಾವಣಾ ಪ್ರಚಾರಕ್ಕೆ ದುಮುಕುತೇನೆ ಎಂದು ವಿವರಿಸಿದರು.

ದಾವಣಗೆರೆಗೆ ಕತ್ತೆನೂ ಬೇಕಿಲ್ಲ, ನರೇಂದ್ರ ಮೋದಿ ಅವರೂ ಬೇಕಿಲ್ಲ. ಇಲ್ಲಿ ಜನಸೇವೆ
ಮಾಡಲು ನನ್ನಂತಹ ಯುವಕ ಬೇಕು. ನಾನು ಒಂದು ಜಾತಿಗೆ ಸೀಮಿತವಾಗಲು ಇಷ್ಟಪಡಲ್ಲ. ಟಕೆಟ್‌ ನೀಡುವ ವಿಷಯದಲ್ಲಿ ಹಣ ಬಲ, ತೋಳ್ಬಲ, ಜಾತಿಬಲಕ್ಕೆ ಹೈಕಮಾಂಡ್ ಮಣೆ ಹಾಕಿರಬಹುದು. ಅವರಿಗೂ ಅವರದೇ ಆದ ಒತ್ತಡಗಳಿರಬಹುದು. ಸಿಎಂ ಸಿದ್ದರಾಮಯ್ಯ, ಸಮುದಾಯದ ಸ್ವಾಮೀಜಿ ಪಕ್ಷೇತರ ನಿಲ್ಲಬೇಡಿ ಎಂದರು. ಎರಡು ದಿನ ಬಿಟ್ಟು ತಿಳಿಸುತ್ತೇನೆ ಎಂದೇಳಿ ಬಂದಿದ್ದೇ. ಇಲ್ಲಿ ಬಂದು ಬೆಂಬಲಿಗರೊಂದಿಗೆ ಸಭೆ ನಡೆಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ ಎಂದರು.
ಸಿಎಂ, ಸ್ವಾಮೀಜಿಯವರಿಗೆ ಗೌರವ ಕೊಡುತ್ತಲೇ ಜನರ ಪರವಾಗಿ ನನ್ನ ಹಕ್ಕನ್ನು ಪ್ರತಿಪಾದಿಸಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಸಿಎಂ ಮತ್ತಿತರರು ಮತ್ತೊಮ್ಮೆ ಮನವರಿಕೆ ಮಾಡಲು ಬಂದರೂ ನನ್ನ ನಿಲುವಿನಲ್ಲಿ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments