Saturday, December 21, 2024
Google search engine
HomeUncategorizedಇದು ಅಲ್ಪಾವದಿ ಸರ್ಕಾರ: ಆರ್.‌ ಅಶೋಕ್‌ ಟೀಕೆ

ಇದು ಅಲ್ಪಾವದಿ ಸರ್ಕಾರ: ಆರ್.‌ ಅಶೋಕ್‌ ಟೀಕೆ

ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಹಾಗೂ ವಿಪಕ್ಷ ನಾಯಕ ಆರ್.‌ ಆಶೋಕ್‌ ರಾಜ್ಯ ಸರ್ಕಾರದ ವಿರುದ್ದ ತೀರ ವಾಗ್ದಾಳಿ ನಡೆಸಿದ್ದಾರೆ.
ಚಂದ್ರ ಶೇಖರನ್‌ ನಿವಾಸಕ್ಕೆ ಶುಕ್ರವಾರ ಮಧ್ಯಾಹ್ನ ಭೇಟಿ ಕೊಟ್ಟು ಅವರ ಕುಟುಂಬದವರಿಗೆ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಚಂದ್ರಶೇಖರ್ ಸಾವು ನಿಷ್ಠಾವಂತ ಅಧಿಕಾರಿಗಳಿಗೆ ಭಯ ಹುಟ್ಟಿಸಿದೆ. ಇದನ್ನು ಸರ್ಕಾರವೇ ಬಲಿ ಪಡೆದಿದೆ.  ಸಿದ್ದರಾಮಯ್ಯ ಸರ್ಕಾರ ಬಂದಾಗಲೆಲ್ಲ ಅಧಿಕಾರಿಗಳು ಭಯ ಭೀತಿಗೆ ಒಳಗಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆಯೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌  ಸರ್ಕಾರವಿದ್ದಾಗ ಡಿವೈಎಸ್ಪಿ ಅನುಪಮಾ ಶೆಣೈ ಅವರು ಬೇಸತ್ತು ರಾಜೀನಾಮೆ ನೀಡಿದ್ದರು. ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಬಂಡೆ, ಡಿ.ಕೆ ರವಿ ಸಾವು ಕೂಡ ಸಿದ್ದರಾಮಯ್ಯ ಸರ್ಕಾರದಲ್ಲಿಯೇ. ‌ಭಾಗ್ಯ ಭಾಗ್ಯ ಎನ್ನುವ ಸರ್ಕಾರ ಅಧಿಕಾರಿಗಳ ಜೀವನ ಭಾಗ್ಯವನ್ನೂ ಕಿತ್ತುಕೊಂಡಿದೆ ಎಂದು ಆರೋಪಿಸಿದರು.
ವಾಲ್ಮೀಕಿ ನಿಗಮಕ್ಕೂ ಐಟಿ ಕಂಪನಿಗೂ ಏನು ಸಂಬಂಧ, ಪರಿಶಿಷ್ಟ ಜಾತಿ ಅಭಿವೃದ್ಧಿಗಾಗಿ ಹಣ ವಿನಿಯೋಗಿಸುವ ನಿಗಮ ಐಟಿ ಕಂಪನಿಗೆ ಹಣನ್ನು  ಹೇಗೆ ವರ್ಗಾಯಿಸಲಿದೆ. ಹಣಕಾಸು ಸಚಿವರಾಗಿ ಸಿದ್ದರಾಮಯ್ಯನವರೇ ಇದ್ದರೂ ಹಣಕಾಸು ಸಚಿವಾಲಯದ ಅನುಮತಿಯಿಲ್ಲದೆ ಹೇಗೆ ವರ್ಗಾವಣೆ ಆಗಿದೆ ಎಂದು ಪ್ರಶ್ನಿಸಿದರು.
ಚಂದ್ರಶೇಖರ್ ಅವರಿಗೆ ನ್ಯಾ.ನಾಗಮೋಹನ್ ದಾಸ್ ಬೆಸ್ಟ್ ಅವಾರ್ಡ್ ನೀಡಿದ್ದಾರೆ. ಕೋವಿಡ್ ಇದ್ದಾಗ‌ ಒಂದು ತಿಂಗಳವರೆಗೆ ಐಸಿಯುವಿನಲ್ಲಿದ್ದ ಚಂದ್ರಶೇಖರ್ ಬದುಕುಳಿದಿದ್ದೇ ಹೆಚ್ಚು. ಭ್ರಷ್ಠಚಾರಿ ಅಧಿಕಾರಿ ಆಗಿದ್ದರೆ ಅವರು ಮಾಡಿರುವ 20 ಲಕ್ಷ ಸಾಲವನ್ನು ತೀರಿಸಿಕೊಳ್ಳುತ್ತಿದ್ದರು. ಆದರೆ ಅದನ್ನು ತೀರಿಸಲಾಗದೆ ಕೆಲಸ ಮಾಡುತ್ತಿದ ಅವರನ್ನು ಸರ್ಕಾರವೇ ಭ್ರಷ್ಟಚಾಋದಲ್ಲಿ ಬಲಿ ಪಡೆದಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಒಂದು ವರ್ಷದ ಸಾಧನೆಯಲ್ಲಿ ಸಚಿವ ನಾಗೇಂದ್ರ ಅವರ ಮೊದಲ‌ ವಿಕೆಟ್ ಪಥನವಾಗಲಿದೆ. ದಕ್ಷ ಅಧಿಕಾರಿಗಳ ಬಲಿ ಪಡೆದ ಸರ್ಕಾರದ ಮೊದಲ ವಿಕೆಟ್ ಪಥನವಾಗಲಿದೆ. ಮೃತ ಅಧಿಜಾರಿ ಕುಟುಂಬಕ್ಕೆ ಗೃಹ ಸಚಿವರು ಪೊಳ್ಳು ಭರವಸೆ ನೀಡಿದ್ದಾರೆ. ಡಿಸಿ ಇನ್ನೂ ಸಂತ್ರಸ್ತರ ಮನೆಗೆ ಬಂದಿಲ್ಲ.‌ ಹಾಗಾಗಿ ಸರ್ಕಾರದ ಭರವಸೆಯ ಬಗ್ಗೆ ಅನುಮಾನವಿದೆ ಎಂದು ದೂರಿದರು.

ಸರ್ಕಾರದ ಸಿಎಂ ಮತ್ತು ಡಿಸಿಎಂ ಇಬ್ಬರೂ ತರಾತುರಿಯಲ್ಲಿ ಸಭೆ ನಡೆಸುತ್ತಿದ್ದಾರೆ. ಸಿಬಿಐಗೆ ಪ್ರಕರಣ ಹೋಗುತ್ತಿದೆ ಎಂದು ಸಭೆ ನಡೆಸಲಾಗುತ್ತಿದೆ. ಒಬ್ಬ ಸಚಿವ ಸಿಎಂ ಡಿಸಿಎಂ ಅನುಮತಿ ಇಲ್ಲದೆ ಅವ್ಯವಹಾರ ನಡೆಸಲು ಹೇಗೆ ಸಾಧ್ಯ? ಸಿಎಂ ಮತ್ತು ಡಿಸಿಎಂ ಪಾಲು ಇದೆ. ಎಂದರು.ಸಿಐಡಿ ತನಿಖೆ‌ ಎಂಬುದೆ ದೊಂಬರಾಟ. ನೊಂದ ಕುಟುಂಬಸ್ಥರ ಅನುಮತಿ ಪಡೆದು ತನಿಖೆಯನ್ನ ಸಿಐಡಿಗೆ ಕೊಡಬೇಕಿತ್ತು. ಆದರೆ ಸರ್ಕಾರ ತರಾತುರಿಯಲ್ಲಿ ಸಿಐಡಿಗೆ ಹಸ್ತಾಂತರಿಸಿದ್ದು ಹೇಗೆ? ಅವ್ಯವಹಾರ ನಡೆದರೂ ಒಬ್ಬನ ಬಂಧನವಾಗಿಲ್ಲ. ಆದರೆ ಪ್ರಜ್ವಲ್ ರೇವಣ್ಣನವರ ಪ್ರಕರಣವನ್ನ ಉಲ್ಲೇಖಿಸದೆ ಬೇರೆಪ್ರಕರಣದಲ್ಲಿ ಸರ್ಕಾರಕ್ಕೆ ಇರುವ ಆಸಕ್ತಿ ಇಲ್ಲಿ ಯಾಕೆ ಇಲ್ಲ ಎಂದು ಕಠೋರವಾಗಿ ಪ್ರಶ್ನಿಸಿದರು.‌

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments